ಜುಲೈ ೧೮ - ಜುಲೈ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೯ನೇ ದಿನ (ಅಧಿಕ ವರ್ಷದಲ್ಲಿ ೨೦೦ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೬೪ - ರೋಮ್‍ನ ಚಕ್ರವರ್ತಿ ನಿರೊನ ಆಡಳಿತದಲ್ಲಿ ಉಂಟಾದ ರೋಮ್‍ನ ಮಹಾ ಬೆಂಕಿಯಲ್ಲಿ ಇಡೀ ರೋಮ್ ನಗರ ನೆಲಸಮ. ೧೮೩೦ - ಯುರುಗ್ವೆಯಲ್ಲಿ ಮೊದಲ ಸಂವಿಧಾನ ಜಾರಿಗೆ. ೧೮೭೨ - ಯುನೈಟೆಡ್ ಕಿಂಗ್‍ಡಮ್ನಲ್ಲಿ ಗುಪ್ತ ಮತಚಾಲನೆ ಜಾರಿಗೆ. ೧೮೯೮ - ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ ಪೊಲೊನಿಯಮ್ ಮೂಲಧಾತುವಿನ ಕಂಡುಹಿಡಿಯುವಿಕೆಯನ್ನು ಘೋಷಿಸಿದರು. ೧೯೭೬ - ಜಿಮ್ನಾಸ್ಟಿಕ್ಸ್ ಪಟು ನಾಡಿಯ ಕೊಮೆನೆಚಿ ೧೪ನೇ ವಯಸ್ಸಿನಲ್ಲಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪರಿಪೂರ್ಣ ೧೦ ಅಂಕವನ್ನು ಗಳಿಸಿದ ಮೊದಲಿಗಳಾದಳು. == ಜನನಗಳು == ೧೮೪೮ - ಡಬ್ಲ್ಯು.ಜಿ. ಗ್ರೇಸ್, ಇಂಗ್ಲೆಂಡ್ನ ಕ್ರಿಕೆಟ್ ಆಟಗಾರ. ೧೯೧೮ - ನೆಲ್ಸನ್ ಮಂಡೇಲ, ದಕ್ಷಿಣ ಆಫ್ರಿಕದ ರಾಷ್ಟ್ರಪತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. ೧೯೨೨ - ಥಾಮಸ್ ಕುಹ್ನ್, ಅಮೇರಿಕ ದೇಶದ ತತ್ವಶಾಸ್ತ್ರಜ್ಞ. ೧೯೩೫ - ಜಯೇಂದ್ರ ಸರಸ್ವತಿ, ಹಿಂದೂ ಧರ್ಮದ ನಾಯಕ. == ಮರಣಗಳು == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ